ಹೆಬ್ರಿ: ಇಲ್ಲಿನ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿಯ ಉದ್ಘಾಟನಾ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ಜು. 17 ರಂದು ನಡೆಯಿತು.
ಮಂಗಳೂರು ಬ್ರಹ್ಮಶ್ರೀ ನಾರಾಯಣಗುರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಜಿ. ಕೇಶವ ಬಂಗೇರ ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕನಿಗೆ ಉತ್ತಮ ಸ್ಥಾನಮಾನವಿದೆ. ಆದರೆ ಉತ್ತಮ ನಾಯಕನ ಆಯ್ಕೆಯಾಗಬೇಕಾದರೆ ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಯಾವುದೇ ಆಮಿಷಕ್ಕೆ ಒಳಗಾಗದೆ ಸೂಕ್ತ ವ್ಯಕ್ತಿಗೆ ಕಡ್ಡಾಯವಾಗಿ ಮತ ಚಲಾಯಿಸಬೇಕು. ವಿದ್ಯಾರ್ಥಿಗಳು ತಮ್ಮಲ್ಲಿ ಜ್ಞಾನ ತುಂಬುತ್ತಿದ್ದಂತೆ ಅಹಂ ಪಟ್ಟು ಎದೆಯುಬ್ಬಿಸಿ ನಡೆಯದೆ ಗೊನೆಬಿಟ್ಟ ಬಾಳೆಯಂತೆ ವಿಧೇಯತೆ ಯಿಂದ ಭಾಗಬೇಕು. ನಿಮ್ಮ ಜೀವನವು ಬೆಳಕಾಗ ಬೇಕಾದರೆ ಕಲಿಕೆಯ ಜೊತೆಯಲ್ಲಿ ಶಿಸ್ತು, ಪರಿಶ್ರಮ, ಗುರಿ ಇರ ಬೇಕಾಗುತ್ತದೆ ಎಂದರು.